Home

ಸಂಕ್ಷಿಪ್ತ ವಿವರ:-

ಕುಶಾಲನಗರ ಪಟ್ಟಣ ಪಂಚಾಯಿತಿಯು 2002ರಲ್ಲಿ ಸ್ಥಾಪನೆಯಾಯಿತು. ಕುಶಾಲನಗರ ಪಟ್ಟಣ ಪಂಚಾಯಿತಿಯು ಮೈಸೂರುನಿಂದ ಬಂಟ್ವಾಳಗೆ ಹೋಗುವ ರಾಜ್ಯ ಹೆದ್ದಾರಿ-88 ರಸ್ತೆಯಲ್ಲಿದ್ದು ಮೈಸೂರುನಿಂದ ಸುಮಾರು 88 ಕೀಲೋಮೀಟರ್ ದೂರದಲ್ಲಿರುತ್ತದೆ.   2001 ರ ಜನಗಣತಿಯ ಪ್ರಕಾರ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13,262 ಜನಸಂಖ್ಯೆಯನ್ನು ಹೊಂದಿರುತ್ತದೆ.ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 13 ವಾರ್ಡ್ ಗಳಿದ್ದು  13 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಕುಶಾಲನಗರ ಪಟ್ಟಣ ಪಂಚಾಯಿತಿಯು ವ್ಯಾಪ್ತಿಯು ಒಟ್ಟು 3.10 ಚದುರ ಕೀಲೋಮೀಟರ್ ಗಳಿರುತ್ತದೆ.

 ಗಣಕೀಕರಣ ಯೋಜನೆಗಳು:

ಜನನ-ಮರಣ(Birth and Death Online Application):

1999 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ಜನನ ಹಾಗು ಮರಣ ದಾಖಲೆಗಳು ಗಣಕೀಕರಣಗೊಳಿಸಲಾಗಿದೆ, ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು ಹಾಗು ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. 1990 ರಿಂದ 1998ರವರೆಗಿನ ಜನನ ಹಾಗು ಮರಣ ದಾಖಲೆಗಳ ಡಾಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ ದಾಖಲೆಗಳನ್ನು ಸಹ ಶೀಘ್ರದಲ್ಲೇ online ಮುಖಾಂತರ ಪರಿಶೀಲಿಸಬಹುದು. ಅಧಿಕೃತ ವೆಬ್ ಸೈಟ್ link:  http://www.kushalnagartown.gov.in/egbnd/index.jsp 

ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)):

ಕೆ.ಎಂ.ಆರ್.ಪಿ. ಯೋಜನೆಯಡಿ ಸಾರ್ವಜನಿಕ ದೂರು ನಿವಾರಣಾ ಕೇಂದ್ರ ತೆರೆಯಲಾಗಿದ್ದು, ಈ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 8 ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ. ಸಾರ್ವಜನಿಕರು ದೂರುಗಳನ್ನು ಪತ್ರ, ದೂರವಾಣಿ ಹಾಗು ಆನ್ ಲೈನ್ ಆಪ್ಲೀಕೇಷನ್ ಮೂಲಕ ಸಲ್ಲಿಸಬಹುದು ಸಹಾಯವಾಣಿ: 08276-271758 ವೆಬ್ ಸೈಟ್ link: http://www.kushalnagartown.gov.in/pgr/grievance-redressal.jsp 

ಸ್ಥಳೀಯ ಸಂಸ್ಥೆಯ ವೆಬ್ ಸೈಟ್:

ಕುಶಾಲನಗರ ಪಟ್ಟಣ ಪಂಚಾಯಿತಿಯ ಅಧಿಕೃತ ಅಂತರ್ಜಾಲ http://www.kushalnagartown.gov.in/ ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.

ಭೌಗೋಳಿಕ ಆಸ್ತಿ ತೆರಿಗೆ ಯೋಜನೆ:

ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬರುವ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ.

No. Of Visitors :
Last Updated   : 05/04/2012  Release History
Release 2.0.0, Powered By Karnataka Municipal Data Society & maintained by Kushalnagar TP
This website can best viewed with the resolution 1024 * 768 using Internet Explorer 7.0 or above.
Valid CSS!